Posts

Showing posts from October, 2019

ಪ್ರಸಂಗಪ್ರತಿಸಂಗ್ರಹದ ಮೊದಲ ಹೆಜ್ಜೆಯ ಲೋಕಾರ್ಪಣೆ!

Image
ಮಾನ್ಯರೇ,
ಪ್ರಸಂಗಪ್ರತಿಸಂಗ್ರಹದ ಲೋಕಾರ್ಪಣವಾಗುತ್ತಿದೆ. ಸುಮಾರು ೪೫೦ ಪ್ರತಿಗಳು ಸೇರಿದ ಈ ಕಣಜವು ದಿನದಿಂದ ದಿನಕ್ಕೆ ಬೆಳೆಯುತ್ತಾ ಹೋಗುತ್ತದೆ.  ಈ ಕೆಳಗೆ ಕೊಟ್ಟ ಕೊಂಡಿಯನ್ನು ಒತ್ತಿದಾಗ ಅತೀ ಇತ್ತೀಚಿನ ಸಂಗ್ರಹದ ಕೋಷ್ಟಕವು ಅನಾವರಣಗೊಳ್ಳುತ್ತದೆ. ಮೇಲೆ ದೊಡ್ಡ ಅಕ್ಷರಗಳಲ್ಲಿ ತೋರಿಸಿದ ಒಟ್ಟು ಪ್ರತಿಗಳ ಸಂಖ್ಯೆಯು ನೀವು ಹಿಂದೆ ನೋಡಿರುವ ಆವೃತ್ತಿಗಿಂತ ಈ ಸಂಗ್ರಹವು ಎಷ್ಟು ಬೆಳೆದಿದೆ ಎಂಬುದರ ಅಂದಾಜನ್ನು ನಿಮಗೆ ಕೊಡುತ್ತದೆ.
ಪ್ರಸಂಗಪ್ರತಿಸಂಗ್ರಹ ಕೋಷ್ಟಕಕ್ಕಾಗಿ ಕೊಂಡಿ ಇದು, ಇದನ್ನೇ ಒತ್ತಿರಿ.
ಈ ಯೋಜನೆಯು ಯಕ್ಷಪ್ರಸಂಗಕೋಶ ಯೋಜನೆಗಿಂತ ಭಿನ್ನ. ಯಕ್ಷಪ್ರಸಂಗಕೋಶದಲ್ಲಿ ನಮ್ಮ ಸ್ವಯಂಸೇವಕರು ಹಿಂದಿನ ಪ್ರಕಾಶನಗಳಲ್ಲಿದ್ದ ಸಾಹಿತ್ಯವನ್ನು ವಿದ್ಯುನ್ಮಾನ ಪ್ರತಿಗಳನ್ನಾಗಿ ಪರಿವರ್ತಿಸಿ, ಆ ನಂತರ ನಮ್ಮೊಂದಿಗಿರುವ  ಯಕ್ಷಗಾನ ಸಾಹಿತ್ಯದ ತಜ್ಞರು ಪದಗಳನ್ನು ಕೂಲಂಕಷವಾಗಿ ಪರೀಕ್ಷಿಸಿ, ಮೂಲ ಕವಿಯ ಆಶಯಕ್ಕೆ ಧಕ್ಕೆ ಬಾರದಂತೆ ಸೇರಿಹೋದ ತಪ್ಪುಗಳನ್ನೂ ತಿದ್ದಿ ಪರಿಷ್ಕರಿಸಿದ ನಂತರವೇ ಅಂತರಜಾಲ ಪ್ರಕಾಶನವಾಗಿ ಹೊರಡುತ್ತವೆ. ಹಕ್ಕುಸ್ವಾಮ್ಯ ಇದ್ದಲ್ಲಿ, ಮೂಲ ಲೇಖಕರ ಪೂರ್ವ ಅನುಮತಿಯಲ್ಲೇ, ಅವರ ಹಕ್ಕುಸ್ವಾಮ್ಯ ಹಾಗೆಯೇ ಇರುವಂತೆ, ಉಚಿತ ಸಾರ್ವಜನಿಕ ಪ್ರಸಾರಕ್ಕಾಗಿ ಈ ಅಂತರಜಾಲ ಪ್ರಕಾಶನಗಳು ಪ್ರಕಟಿತವಾಗುತ್ತಿವೆ.
ಪ್ರಸಂಗಪ್ರತಿಸಂಗ್ರಹವು ಯಕ್ಷಪ್ರಸಂಗಕೋಶಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ. ಇಲ್ಲಿ ನಮಗೆ ಸಿಕ್ಕ ಎಲ್ಲಾ ಹಿಂದಿನ ಪ್ರಸಂಗ ಪ್ರಕ…