Posts

Showing posts from November, 2019

ಪ್ರಸಂಗಪ್ರತಿಸಂಗ್ರಹವು ೫೦೦ರ ಗಡಿ ದಾಟಿದೆ, ೪,೦೦೦ರ ಗುರಿ ಮುಟ್ಟಲು ನಿಮ್ಮ ಸಹಾಯ ಬೇಕೇ ಬೇಕಿದೆ!

Image
ಮಹನೀಯರೇ,

ಪ್ರಸಂಗಪ್ರತಿಸಂಗ್ರಹವು ಮೊದಲ ತಿಂಗಳ ಸಾಮೂಹಿಕ ಪ್ರಯತ್ನದಲ್ಲೇ ೫೦೦ರ ಗಡಿ ದಾಟಿರುವುದು ಹೆಮ್ಮೆಯ ವಿಷಯವೇ!

ಪ್ರಸಂಗಪ್ರತಿಸಂಗ್ರಹ ಕೋಷ್ಟಕಕ್ಕಾಗಿ ಕೊಂಡಿ ಇದು, ಇದನ್ನೇ ಒತ್ತಿರಿ.
ನಾವು ಹಾಕಿಕೊಂಡಿರುವ ೪,೦೦೦ ಪ್ರಸಂಗಗಳ ಗಡಿ ದಾಟುವುದು ದುರ್ಗಮವೆನಿಸಿದರೂ ಇದೇರೀತಿಯ ಯಕ್ಷಪ್ರೇಮಿಗಳ ಸಹಕಾರ ತಾರಕಕ್ಕೇರಿದರೆ, ಇದು ಸುಲಭ ಸಾಧ್ಯವೇ. ಸುಮಾರು ೫೦ರಷ್ಟು ಇನ್ನಷ್ಟು ಪ್ರಸಂಗಗಳು ಸಿದ್ಧವಿದ್ದರೂ ನಾವು ಇನ್ನೂ ಬಿಡುಗಡೆ ಮಾಡಿಲ್ಲ, ಕಾರಣ ಸಮಕಾಲೀನ ಕವಿಗಳ ಅನುಮತಿ ಪಡೆಯುವುದು ಧರ್ಮ, ಅವರ ಅನುಮತಿ ಸಿಕ್ಕಿದಂತೆ ಅವೂ ಸೇರಿಕೊಳ್ಳುತ್ತವೆ.

ನಮಗೆ ಸಹಕರಿಸುವ ಯಕ್ಷಸೇವಕರ ತಂಡ ಇನ್ನಷ್ಟು ಬೆಳೆಯಲಿ, ಕಾರಣ ಅಪರೂಪದ ಪ್ರಸಂಗಗಳೆಲ್ಲಾ ಮೂಲೆಮೂಲೆಗಳಲ್ಲಿರುವ ನೈಜ ಯಕ್ಷಪ್ರೇಮಿಗಳ ಕಪಾಟಿನಲ್ಲಿವೆ ಹಾಗೂ ಅವುಗಳ ಕುರಿತಾಗಿ ಮತ್ತು ಅವುಗಳ ಮಾಲೀಕರ ಕುರಿತಾಗಿ ಪ್ರಚಾರವೇ ಇರುವುದಿಲ್ಲ. ಆದುದರಿಂದಲೇ ನಮಗೆ ಯಕ್ಷಗಾನದ ಸತ್ವವು ಮಣ್ಣಿನಲ್ಲಿ ಸೇರಿ ಹೋಗಿರುವ ಎಲ್ಲಾ ಊರುಗಳಿಂದ, ಯಕ್ಷಗಾನವನ್ನು ಆರಾಧಿಸುವ ಎಲ್ಲಾ ಮನೆಮನೆಗಳಿಂದ (ಕರ್ನಾಟಕದ ಹೊರಗೂ, ವಿದೇಶಗಳೂ ಸೇರಿ) ಅವು ಸ್ಕ್ಯಾನ್‌ ಆಗಿ ಬರಬೇಕಾದರೆ, ಅವರತ್ತ ಸಂಪರ್ಕದ ಸೇತುವೆ ಕಟ್ಟುವ, ಅವರಿಗೆ ಆಪ್ತರಾಗಿರುವ ನಮ್ಮ ಈ ಪ್ರಾಮಾಣಿಕ ಪ್ರಯತ್ನದಲ್ಲಿ ನಂಬಿಕೆ ಮತ್ತು ಅನುಕಂಪ ಇರುವ ನಿಮ್ಮಂತಹ ಯಕ್ಷಪ್ರೇಮಿ ಮಧ್ಯವರ್ತಿಗಳ ಸಹಾಯ ಬೇಕೇ ಬೇಕು.

ನಮಗೆ ಸಹಕರಿಸಲು ಹೊರಟಿರುವ ನಿಮ್ಮ ಸಮಯ ಮತ್ತು ಶಕ್ತಿಯು ಅಮೂಲ್…