Posts

Showing posts from December, 2019

2020 - 700 ಪ್ರಸಂಗ ಪ್ರತಿಗಳ ಗಡಿ ದಾಟಿ ಹೊಸ ವರುಷದ ಹರುಷದ ಶುಭಾಶಯ ಕೋರುವ ಪ್ರಸಂಗಪ್ರತಿಸಂಗ್ರಹ ತಂಡ ಹಾಗೂ ಯಕ್ಷವಾಹಿನಿ ಸಮೂಹ!

Image
ಪ್ರಸಂಗಪ್ರತಿಸಂಗ್ರಹವು ೭೦೦ರ ಗಡಿ ದಾಟಿದೆ ಎನ್ನಲು ಸಂತಸವಾಗುತ್ತಿದೆ. ಇತ್ತೀಚಿನ ಡಿಸೆಂಬರ್‌ ೨೯ರ  ಪ್ರಸಂಗಪ್ರತಿ ಸ್ಕ್ಯಾನಿಂಗ್‌ ಕಮ್ಮಟದಲ್ಲಿ ಸ್ಕ್ಯಾನ್‌ ಆದ ಪ್ರಸಂಗಗಳು ಸೇರಿದ್ದು ೭೦೦ರ ಗಡಿ ದಾಟಲು ಸಾಧ್ಯವಾಗಿದೆ. ಮುಂದೆ ಎಲ್ಲೆಲ್ಲಿ ನೂರಾರು ನಮ್ಮ ಸಂಗ್ರಹದಲ್ಲಿ ಇರದ ಪ್ರಸಂಗ ಪುಸ್ತಕಗಳು ಲಭ್ಯವೋ ಅಲ್ಲಲ್ಲಿ ಸ್ಕ್ಯಾನಿಂಗ್‌ ಕಮ್ಮಟಗಳನ್ನು ನಡೆಸುವ ಸ್ವಯಂಸೇವಕರು ಒಟ್ಟಾದರೆ, ತಿಂಗಳಿಗೆ ಒಂದು ಕಮ್ಮಟವಾದರೂ ನಡೆದು ನಾವು ೪,೦೦೦ ಪ್ರಸಂಗಪ್ರತಿಗಳ ಗುರಿಯತ್ತ ಬೇಗ ಸಾಗುವುದು ಸಾಧ್ಯ ಎನ್ನಿಸುತ್ತಿದೆ. ಮುಂದಿನ ಬೆಂಗಳೂರಿನ ಸ್ಕ್ಯಾನಿಂಗ್‌ ಕಮ್ಮಟವು ಪಟ್ಟಾಜೆ ವಸಂತಕೃಷ್ಣ ಭಟ್ಟರ ಮನೆಯಲ್ಲಿ ನಡೆಯಲಿದ್ದು ೮೦೦ರ ಗಡಿ ದಾಟುವ ಕನಸು ಗರಿಗೆದರಸುತ್ತಿದೆ.
ಪ್ರಸಂಗಪ್ರತಿಸಂಗ್ರಹ ಕೋಷ್ಟಕಕ್ಕಾಗಿ ಕೊಂಡಿ ಇದು, ಇದನ್ನೇ ಒತ್ತಿರಿ.

ಪ್ರಸಂಗಪ್ರತಿಸಂಗ್ರಹ  ಆಂಡ್ರೋಯ್ಡ್ ಆಪ್ ನ ಕೊಂಡಿ : https://play.google.com/store/apps/details?id=prasanga.prati.sangraha
ಹಳೆಯ ಕೃತಿಗಳ ಜೊತೆಗೆ ಸಮಕಾಲೀನ ಕೃತಿಗಳೂ ಸೇರುತ್ತಿವೆ. ಸಮಕಾಲೀನ ಕೃತಿಗಳ ಕುರಿತಾಗಿ ಅವುಗಳ ಕವಿ ಹಾಗೂ ಪ್ರಕಾಶಕರ ಒಪ್ಪಿಗೆ ನೇರವಾಗಿ ಇಲ್ಲಾ ಪರೋಕ್ಷವಾಗಿ ತೆಗೆದುಕೊಳ್ಳುತ್ತಿದ್ದೇವೆ. ಒಪ್ಪಿಗೆ ಸಿಗದಿದ್ದರೆ ಅವುಗಳನ್ನು ತಡೆ ಹಿಡಿದು, ಮುಂದೆ ಸಿಗಬಹುದೆಂಬ ಆಶಯದಲ್ಲಿ ಇದ್ದೇವೆ. ಇಲ್ಲಿ ಒಂದು ಸೂಕ್ಷ್ಮ ವಿಚಾರವಿದೆ. ಅಂತರಜಾಲದಲ್ಲಿ ಸ್ಕ್ಯಾನ್‌ ಆದ ಪ್ರತಿ ಸೇರಿದರೆ ಅವು…

ಡಿಸೆಂಬರ್‌ ೨೯, ೨೦೧೯: ಮತ್ತೆ ಸುಮಾರು ೫೦ ಪ್ರಸಂಗಗಳ ಸ್ಕ್ಯಾನ್‌ ಆಗಿ ಎರಡನೇ ಪ್ರಸಂಗ ಪ್ರತಿ ಸ್ಕ್ಯಾನ್‌ ಕಮ್ಮಟ ಸಂಪನ್ನ

Image
ಬರೇ ೪ ಜನರ ಸ್ವಯಂಸೇವೆ ಸಿಕ್ಕರೂ ಸುಮಾರು ೫೦ ಪ್ರಸಂಗಗಳ ಸ್ಕ್ಯಾನ್‌ ಒಮ್ಮೆಲೇ ಆಗಿಹೋಗುವ ಮೂಲಕ ಎರಡನೇ ಪ್ರಸಂಗ ಸ್ಕ್ಯಾನ್‌ ಕಮ್ಮಟವು ಫಲಕಾರಿಯಾಗಿ ಸಂಪನ್ನವಾಯಿತು. ವಸಂತಕೃಷ್ಣರ ತಂದೆಯವರಾದ ಡಾ. ಪಟ್ಟಾಜೆ ಗಣೇಶ ಭಟ್ಟರ ಸಂಗ್ರಹದ ಹೆಚ್ಚಿನ ಪ್ರಸಂಗ ಪುಸ್ತಕಗಳು ಸ್ಕ್ಯಾನ್‌ ಆದವು. ಡಾ. ಆನಂದರಾಮ ಉಪಾಧ್ಯ ಹಾಗೂ ರವಿ ಮಡೋಡಿಯವರ ಸಂಗ್ರಹದ ಪ್ರಸಂಗ ಪುಸ್ತಿಕೆಗಳು ಮುಂದಿನ ಕಮ್ಮಟದ ನಿರೀಕ್ಷೆಯಲ್ಲಿ ಸಂಚಿಗಳಲ್ಲಿ ಹಾಗೇ ಉಳಿದವು.‌

ಈ ಕಮ್ಮಟದಲ್ಲಿ ಸ್ಕ್ಯಾನ್‌ ಆದ ಪ್ರಸಂಗಗಳು ಇನ್ನೊಂದು ವಾರದಲ್ಲೇ  ಒಪ್ಪಗೊಂಡು ನಮ್ಮ ಸಂಗ್ರಹದಲ್ಲಿ ಸೇರಿ ಸಂಗ್ರಹವು ೭೦೦ರ ಗಡಿ ದಾಟುವ ಶುಭ ಸಮಾಚಾರವನ್ನು ನಿರೀಕ್ಷಿಸಿರಿ. 

ಪ್ರಸಂಗಪ್ರತಿಸಂಗ್ರಹ ಕೋಷ್ಟಕಕ್ಕಾಗಿ ಕೊಂಡಿ ಇದು, ಇದನ್ನೇ ಒತ್ತಿರಿ.

ಪ್ರಸಂಗಪ್ರತಿಸಂಗ್ರಹ  ಆಂಡ್ರೋಯ್ಡ್ ಆಪ್ ನ ಕೊಂಡಿ : https://play.google.com/store/apps/details?id=prasanga.prati.sangraha
ನಟರಾಜ ಉಪಾಧ್ಯರ ಮನೆಗೆ ವಸಂತಕೃಷ್ಣರು ಬೇಗ ಸೇರಿದ ಕೂಡಲೇ ಇಬ್ಬರೂ ಕುಳಿತು, ಅಕಾಡೆಮಿಯಲ್ಲಿ ಸಿಕ್ಕ ಮೂಡಲಪಾಯದ ಘನ ಕಲಾವಿದ ಹೊಸ ಹೆಮ್ಮಿಗೆಯ ಚಿಕ್ಕ ಚೌಡಯ್ಯ ನಾಯಕರ ಸಂಗ್ರಹದ ಮೂಡಲಪಾಯದಲ್ಲಿ ಬಳಕೆ ಇರುವ ೬ ಪ್ರಸಂಗಗಳ ಸ್ಕ್ಯಾನ್‌ ಮಾಡಿದರು.ಅಷ್ಟೊತ್ತಿಗೇ ಅಶ್ವಿನಿ ಹೊದಲ ಅವರು ಮಗಳು ಅಮೂಲ್ಯಳೊಂದಿಗೆ ಸೇರಿಕೊಂಡಾಗ, ಸ್ಕ್ಯಾನಿಂಗಿಗೆ ವೇಗ ಬಂತು.


ಮಧ್ಯಾಹ್ನ ಊಟದ ನಂತರ, ಸೌಹಾರ್ದದ ಭೇಟಿಗೆ ಡಾ. ಆನಂದರಾಮ ಉಪಾಧ್ಯರು ಆಗಮಿಸಿದರು. …

ಕಾಂಕ್ರೀಟ್ ಮೇಲಿನ ಕಾಡಿನ ಕೆಳಗೆ ಎರಡನೇ ಸಾಮೂಹಿಕ ಪ್ರಸಂಗ ಸ್ಕ್ಯಾನಿಂಗ್ ಕಮ್ಮಟಕ್ಕೆ ನಿಮಗೆ ಸವಿನಯ ಆಮಂತ್ರಣ!

Image
ಪ್ರಸಂಗಪ್ರತಿಸಂಗ್ರಹ ಯೋಜನೆಯಡಿ ಪ್ರತಿಗಳ ಸಂಖ್ಯೆ ೬೦೦ ಪ್ರತಿಗಳ ಗಡಿ ದಾಟಿ ೭೦೦ಕ್ಕೆ ಹತ್ತಿರವಾಗುತ್ತಿದೆ. ಆದರೆ ಸುಮಾರು ೪,೦೦೦ ಪ್ರತಿಗಳ ದೂರದ ಗುರಿ ಮುಟ್ಟಬೇಕಾದರೆ ನಮ್ಮ ಸ್ವಯಂಸೇವೆಯ ಒಗ್ಗಟ್ಟಿನ ಕೆಲಸ ಹೆಚ್ಚೆಚ್ಚು ಆಗಬೇಕಾಗಿದೆ. ಈ ಪ್ರಯುಕ್ತ ಎರಡನೇ  ಸಾಮೂಹಿಕ “ಪ್ರಸಂಗ ಸ್ಕ್ಯಾನಿಂಗ್ ಕಮ್ಮಟ” ವನ್ನು ಇದೇ ಭಾನುವಾರ, ಡಿಸೆಂಬರ್ನ‌ ೨೯, ೨೦೧೯ರಂದು ನಡೆಸುತ್ತಿದ್ದೇವೆ.   
ನಿಮ್ಮೊಂದಿಗಿರುವ ಸ್ಪಷ್ಟವಾಗಿ ಸ್ಕ್ಯಾನ್ ಮಾಡಬಲ್ಲ  ಸ್ಮಾರ್ಟ್ ಫೋನುಗಳೇ ಪರಿಣಾಮಕಾರಿ ಆಯುಧಗಳಾಗಿ ಸಹಕರಿಸಲಿವೆ.  ಯಕ್ಷಪ್ರೇಮಿ ಸ್ವಯಂಸೇವಕರೆಲ್ಲಾ ಅಂದು ನಮ್ಮೊಂದಿಗೆ ಕೆಲವು ಗಂಟೆಗಳ ಕಾಲ ಸೇರಿ ಸಹಕರಿಸಿ.  ಬೆಳಿಗ್ಗೆ ೧೦ ಘಂಟೆಯಿಂದ ಸಂಜೆ ೫ ರ ತನಕ ನಡೆಯುವ ಈ ಕಮ್ಮಟದಲ್ಲಿ ಭಾಗವಹಿಸುವವರಿಗೆ ಊಟ, ತಿಂಡಿ, ಕಾಫಿ / ಚಾಗಳ ವ್ಯವಸ್ಥೆ ಇರುತ್ತದೆ. ಕೆಲಸದ ಜೊತೆಗೆ ಯಕ್ಷಗಾನದ ವಾತಾವರಣ ಸೃಷ್ಟಿಸಿಕೊಂಡು ಸ್ವಲ್ಪ ಗಮ್ಮತ್ತು ಕೂಡಾ ಮಾಡೋಣ!
ಯಾವತ್ತು: ಇದೇ ಭಾನುವಾರ, ಡಿಸೆಂಬರ್ ೨೯ನೇ ತಾರೀಖು, ೨೦೧೯ ಯಾವಾಗ: ಬೆಳಿಗ್ಗೆ ೧೦ ಘಂಟೆಯಿಂದ ಮಧ್ಯಾಹ್ನ  ೫ ಘಂಟೆಯ ತನಕ, ಶಕ್ತಿ ಉಳಿದವರಿಗೆ ಆರು ಘಂಟೆಯ ತನಕ ಎಳೆಯೋಣ (೧೧ ಘಂಟೆಗ ಲಘು ಉಪಾಹಾರ, ೧ ಘಂಟೆಗೆ ಊಟ, ೩ ಘಂಟೆಗೆ ಕಾಫಿ ./ ಚಾ, ೫ ಘಂಟೆಗೆ ಮತ್ತೆ ತಿಂಡಿ) ಎಲ್ಲಿ: ನಟರಾಜ ಉಪಾಧ್ಶರ ಕಾಡಿನ ಮನೆ #82, Ashrama, First Main, Vivekanandanagara,  Katriguppe Main Road, Bengaluru 560085
ಸ್ಥಳ ನಕ್ಷೆOp…

ನಯನ ರಂಗಮಂದಿರದಲ್ಲಿ “ಯಕ್ಷಗಾನ ಪ್ರಸಂಗಗಳ ಡಿಜಿಟಲೀಕರಣ ಲೋಕಾರ್ಪಣೆ ಸಮಾರಂಭ ಹಾಗೂ ಯಕ್ಷರೂಪಕ ಪಂಚಪಾವನ ಕಥಾ”

Image
ಕರ್ನಾಟಕ ಯಕ್ಷಗಾನ ಅಕಾಡೆಮಿಯು ಯಕ್ಷವಾಹಿನಿ ಸಂಸ್ಥೆಯ ಸಹಯೋಗದಲ್ಲಿ ದಿನಾಂಕ 27.12.2019ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದ ನಯನ ರಂಗಮಂದಿರದಲ್ಲಿ “ಯಕ್ಷಗಾನ ಪ್ರಸಂಗಗಳ ಡಿಜಿಟಲೀಕರಣ ಲೋಕಾರ್ಪಣೆ ಸಮಾರಂಭ ಹಾಗೂ ಯಕ್ಷರೂಪಕ ಪಂಚಪಾವನ ಕಥಾ” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ತಾವು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕಾಗಿ ವಿನಂತಿ.


ದಯವಿಟ್ಟು ಇದೇ ಆಮಂತ್ರಣವೆಂದು ಬನ್ನಿ, ಬಂದು ಚೆಂದಗಾಣಿಸಿ
 - ಯಕ್ಷಪ್ರಸಂಗಕೋಶ ಯೋಜನಾ ಸಮೂಹ ಹಾಗೂ ಯಕ್ಷವಾಹಿನಿ ತಂಡ

ಒಂದೇ ಗೂಗಲ್‌ ಪ್ಲೇ ಸ್ಟೋರಿನ ಆಪ್‌ ನ ಮೂಲಕ "ಪ್ರಸಂಗಪ್ರತಿಸಂಗ್ರಹ" ಹಾಗೂ "ಯಕ್ಷಪ್ರಸಂಗಕೋಶ" ಈ ಎರಡೂ ಯೋಜನೆಗಳ ಎಲ್ಲಾ ಪ್ರಸಂಗಗಳು ಈಗ ನಿಮ್ಮ ಮೊಬೈಲಿನಲ್ಲಿ ಸುಲಭ ಲಭ್ಯ!

Image
ಮುಡಿಪಿನ ಸ್ವಯಂಸೇವೆಯಿಂದಲೇ ಮಿಂಚುತ್ತಿರುವಯಕ್ಷವಾಹಿನಿಯ ಯಕ್ಷಾಭಿಮಾನಿ ಯಕ್ಷಸೇವಕರ ಸಮೂಹದ ಯಶಸ್ಸಿನ ಮುಡಿಗೆ ಇನ್ನೊಂದು ಚಿನ್ನದ ಗರಿ ಏರಿದೆ. ಯಕ್ಷಗಾನದ ಪ್ರಸಂಗಪ್ರತಿಸಂಗ್ರಹ ಯೋಜನೆಯಲ್ಲಿ ಸಂಗ್ರಹಿಸಲ್ಪಟ್ಟಪ್ರಸಂಗಪ್ರತಿಗಳನ್ನುಯಕ್ಷಪ್ರೇಮಿಗಳಿಗೆ ಉಚಿತವಾಗಿ ಲಭಿಸುವಂತೆ ಮಾಡುವುದರ ಜೊತೆಗೇ ಸಂಬಂಧಿತ ಯಕ್ಷಪ್ರಸಂಗಕೋಶ ಯೋಜನೆಯಲ್ಲಿಯೂ ಪ್ರಕಟವಾಗಿರುವ ಪ್ರಸಂಗ ಪುಸ್ತಕಗಳ ವಿದ್ಯುನ್ಮಾನ ಪ್ರತಿಗಳನ್ನು ಸುಲಭವಾಗಿ ಆಸಕ್ತರಿಗೆ ಲಭ್ಯವಾಗುವಂತೆ ಮಾಡುವುದಕ್ಕೋಸ್ಕರ ಆಂಡ್ರಾಯ್ಡ್‌ ಆಪ್‌ ಅನ್ನು (android app) ಸಿದ್ಧಪಡಿಸಲಾಗಿಬಿಡುಗಡೆ ಮಾಡಲಾಗಿದೆ.

ಇದನ್ನು ನಿಮ್ಮ ಮೊಬೈಲ್ ನಲ್ಲಿ ಅನುಸ್ಥಾಪಿಸಿಕೊಳ್ಳುವ ಮೂಲಕ ಎರಡೂ ಯೋಜನೆಗಳಿಗೆಸಂಬಂಧಿಸಿದ ಎಲ್ಲಾ ಪ್ರಸಂಗಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು.(ಪ್ರಸಂಗಪ್ರತಿಸಂಗ್ರಹ ಯೋಜನೆ: ಅಂತರಜಾಲದ ಮೂಲಕ ಉಚಿತ ಪ್ರಸಾರಕ್ಕಾಗಿಯೇ, ಹಕ್ಕು ಸ್ವಾಮ್ಯದವರ ಅನುಮತಿಯ ಮೇರೆಗೆ,ಬೇರೆ ಬೇರೆ ಪ್ರಕಾಶನಗಳ ಯಾ ಹಸ್ತಪ್ರತಿಗಳ ಸ್ಕ್ಯಾನ್‌ ಪ್ರತಿಗಳ ಸಂಗ್ರಹ; ಯಕ್ಷಪ್ರಸಂಗಕೋಶ ಯೋಜನೆ: ಪ್ರಸಂಗ ಕವಿಯ ಮೂಲ ಹಕ್ಕು ಸ್ವಾಮ್ಯ ಹಾಗೂ ಅನುಮತಿಯ ಪರಿಧಿಯಲ್ಲೇ ಯಕ್ಷವಾಹಿನಿಯ ಸಮೂಹದಿಂದ ವಿದ್ಯುನ್ಮಾನ ಪ್ರತಿಯಾಗಿ ಮಾರ್ಪಟ್ಟು, ಯಕ್ಷಗಾನ ಸಾಹಿತ್ಯ ಹಾಗೂ ಛಂದಸ್ಸಿನ ತಜ್ಞರಿಂದ ಬೇಕಿದ್ದಲ್ಲಿ ಪರಿಷ್ಕೃತಗೊಂಡು ಅಂತರಜಾಲದಲ್ಲಿ ಉಚಿತ ಪ್ರಸಾರಕ್ಕಾಗಿಯೇ ಪ್ರಕಾಶನಗೊಂಡ ಪ್ರಸಂಗಗಳ ಕೋಶ)

ಆಪ್ ನ ಕೊಂಡಿ : https://play.googl…

600ರ ಗಡಿ ದಾಟಿದ ಪ್ರಸಂಗಪ್ರತಿಸಂಗ್ರಹ - ಪದೇ ಪದೇ ಪ್ರಸಂಗಪ್ರತಿ ಸ್ಕ್ಯಾನಿಂಗ್‌ ಕಮ್ಮಟಗಳು ಅಲ್ಲಲ್ಲಿ ನಡೆಯಬೇಕಾಗಿವೆ!

Image
ಪ್ರಸಂಗಪ್ರತಿಸಂಗ್ರಹವು ೬೦೦ರ ಗಡಿ ದಾಟಿದೆ ಎನ್ನಲು ಸಂತಸವಾಗುತ್ತಿದೆ. ಇತ್ತೀಚಿನ ಪ್ರಸಂಗಪ್ರತಿ ಸ್ಕ್ಯಾನಿಂಗ್‌ ಕಮ್ಮಟದಲ್ಲಿ ಸ್ಕ್ಯಾನ್‌ ಆದ ಪ್ರಸಂಗಗಳು ಇನ್ನೂ ಸೇರಿಲ್ಲ,  ಇದೇ ಡಿಸೆಂಬರ್‌ ತಿಂಗಳ ಕೊನೆಯಲ್ಲಿ ಬೆಂಗಳೂರಿನಲ್ಲೇ ಇನ್ನೊಂದು ಕಮ್ಮಟ ನಡೆಸುವ ಗುರಿ ಇದೆ. ಮುಂದೆ ಎಲ್ಲೆಲ್ಲಿ ನೂರಾರು ನಮ್ಮ ಸಂಗ್ರಹದಲ್ಲಿ ಇರದ ಪ್ರಸಂಗ ಪುಸ್ತಕಗಳು ಲಭ್ಯವೋ ಅಲ್ಲಲ್ಲಿ ಸ್ಕ್ಯಾನಿಂಗ್‌ ಕಮ್ಮಟಗಳನ್ನು ನಡೆಸುವ ಸ್ವಯಂಸೇವಕರು ಒಟ್ಟಾದರೆ, ತಿಂಗಳಿಗೆ ಒಂದು ಕಮ್ಮಟವಾದರೂ ನಡೆದು ನಾವು ೪,೦೦೦ ಪ್ರಸಂಗಪ್ರತಿಗಳ ಗುರಿಯತ್ತ ಬೇಗ ಸಾಗುವುದು ಸಾಧ್ಯ ಎನ್ನಿಸುತ್ತಿದೆ.
ಪ್ರಸಂಗಪ್ರತಿಸಂಗ್ರಹ ಕೋಷ್ಟಕಕ್ಕಾಗಿ ಕೊಂಡಿ ಇದು, ಇದನ್ನೇ ಒತ್ತಿರಿ.

ಹಳೆಯ ಕೃತಿಗಳ ಜೊತೆಗೆ ಸಮಕಾಲೀನ ಕೃತಿಗಳೂ ಸೇರುತ್ತಿವೆ. ಸಮಕಾಲೀನ ಕೃತಿಗಳ ಕುರಿತಾಗಿ ಅವುಗಳ ಕವಿ ಹಾಗೂ ಪ್ರಕಾಶಕರ ಒಪ್ಪಿಗೆ ನೇರವಾಗಿ ಇಲ್ಲಾ ಪರೋಕ್ಷವಾಗಿ ತೆಗೆದುಕೊಳ್ಳುತ್ತಿದ್ದೇವೆ. ಒಪ್ಪಿಗೆ ಸಿಗದಿದ್ದರೆ ಅವುಗಳನ್ನು ತಡೆ ಹಿಡಿದು, ಮುಂದೆ ಸಿಗಬಹುದೆಂಬ ಆಶಯದಲ್ಲಿ ಇದ್ದೇವೆ. ಇಲ್ಲಿ ಒಂದು ಸೂಕ್ಷ್ಮ ವಿಚಾರವಿದೆ. ಅಂತರಜಾಲದಲ್ಲಿ ಸ್ಕ್ಯಾನ್‌ ಆದ ಪ್ರತಿ ಸೇರಿದರೆ ಅವುಗಳ ಮುದ್ರಿತ ಪ್ರತಿಗಳ ಮಾರಾಟಕ್ಕೆ ಪೆಟ್ಟು ಬೀಳಬಹುದು. ಆದರೆ ಪ್ರಚಾರ ಮತ್ತು ಜನಪ್ರಿಯತೆ ವಿಚಾರದಲ್ಲಿ ಅಂತರಜಾಲ ಸ್ಕ್ಯಾನ್ ಪ್ರತಿಗಳು ಕವಿ ಮತ್ತು ಪ್ರಕಾಶಕರಿಗೆ ಹೆಚ್ಚಿನ ಖ್ಯಾತಿ, ಗೌರವ ಸಂದಾಯವನ್ನು ತರಬಹುದು. ಒಟ್ಟಿನಲ್ಲಿ, ಮುದ್ರ…

ಸುಮಾರು ೫೦ ಪ್ರಸಂಗಗಳ ಸ್ಕ್ಯಾನ್‌ ಆಗಿ ಮೊದಲ ಪ್ರಸಂಗ ಪ್ರತಿ ಸ್ಕ್ಯಾನ್‌ ಕಮ್ಮಟ ಸಂಪನ್ನ

Image
ಬರೇ ೫ ಜನರ ಸ್ವಯಂಸೇವೆ ಸಿಕ್ಕರೂ ಸುಮಾರು ೫೦ ಪ್ರಸಂಗಗಳ ಸ್ಕ್ಯಾನ್‌ ಒಮ್ಮೆಲೇ ಆಗಿಹೋಗುವ ಮೂಲಕ ಮೊದಲ ಪ್ರಸಂಗಸ್ಕ್ಯಾನ್‌ ಕಮ್ಮಟವು ಫಲಕಾರಿಯಾಗಿ ಸಂಪನ್ನವಾಯಿತು.

ಲ. ನಾ. ಭಟ್ಟರ ಸಂಗ್ರಹದಲ್ಲಿನ ನೂರಕ್ಕಿಂತ ಹೆಚ್ಚು ಪ್ರಸಂಗಗಳಲ್ಲಿ ಇನ್ನೂ ಐವತ್ತು ಉಳಿದೇ ಹೋಯಿತು. ಐದೇ ಜನರಿದ್ದ ಕಾರಣ ಲ. ನಾ. ಭಟ್ಟರ ಮನೆಯಲ್ಲೇ ಉಳಿದೆವು, ಕ್ಲಬ್‌ ಹೌಸಿಗೆ ಹೋಗುವ ಯೋಜನೆಯನ್ನು ಬದಿಗಿಟ್ಟೆವು. ಸುಮಾರು ೪ ಗಂಟೆಗಳ ಕಾಲ ನಡೆದ ಸೇವೆಯಲ್ಲಿ ಸರಾಸರಿಯಾಗಿ ಒಬ್ಬೊಬ್ಬರು ಹತ್ತು ಪ್ರಸಂಗ ಸ್ಕ್ಯಾನ್‌ ಮಾಡಿದೆವು, ಉಳಿದ ಸಮಯದಲ್ಲಿ ರಾಗಿ ಮಾಲ್ಟ್‌, ಚಾ, ಚಕ್ಕುಲಿ, ಕೋಡುಬಳೆ, ಮುಂಡಕ್ಕಿ ಉಪ್ಕರಿ, ಚಾಕಲೇಟುಗಳ ಸೇವೆ (ಸೇವನೆ) ಮಾಡುತ್ತಾ ಯಕ್ಷಗಾನದ ವಿದ್ಯಮಾನಗಳ ಸುತ್ತ ಹರಟುತ್ತಾ ದಣಿವಾಗದೇ ಕಳೆದೆವು, ಮುಂದಿನ ಕಮ್ಮಟವನ್ನು ಮತ್ತೆ ನಿರೀಕ್ಷಿಸುವಷ್ಟು ಯಶಸ್ಸನ್ನು ಕಂಡೆವು. ಲ. ನಾ. ಭಟ್ಟರ ಜೊತೆಗೆ ಅವರ ಯಕ್ಷಪ್ರೇಮಿ ಸ್ನೇಹಿತ ಉಲ್ಲಾಸ್‌ ಇದ್ದರು. ಯಕ್ಷವಾಹಿನಿಯ ಖಾಯಂ ಸ್ವಯಂಸೇವಕರಾದ  ಅಶ್ವಿನಿ ಹೊದಲ, ವಸುಮತಿ, ಮತ್ತು ನಟರಾಜ ಉಪಾಧ್ಯರೂ ಸೇರಿದರು. ಲ.ನಾ. ಭಟ್ಟರ ತಾಯಿ ಮತ್ತು ಮಡದಿ ಅವರು ಚಾ ತಿಂಡಿಗಳ ಮೂಲಕ ಸೇರಿದವರ ಅತಿಥಿ ಸತ್ಕಾರವನ್ನು ಯಥೇ‍ಚ್ಛವಾಗಿ ಮಾಡಿದರು, ಲ. ನಾ. ಭಟ್ಟರು ಇಬ್ಬರು ಕುವರರು ಲವ ಕುಶರಂತೆ ಲೀಲೆಗಳಿಂದ ರಂಜಿಸಿದರು. ಈ ಕಮ್ಮಟದ ಸುತ್ತ ಸಾಕಷ್ಟು ದುಡಿದ ಎಲ್ಲರಿಗೂ ವಿಶೇಷವಾಗಿ ಆತಿಥೇಯರಿಗೆ ಧನ್ಯವಾದಗಳು.

ಇನ್ನೂ ಸ್ವಯಂಸೇವಕರು ಬ…

ಸಾಮೂಹಿಕ ಪ್ರಸಂಗ ಸ್ಕ್ಯಾನಿಂಗ್ ಕಮ್ಮಟದಲ್ಲಿ ನಮ್ಮನ್ನು ಸೇರಿಕೊಳ್ಳಲು ಸವಿನಯ ಆಮಂತ್ರಣ

Image
ಪ್ರಸಂಗಪ್ರತಿಸಂಗ್ರಹ ಯೋಜನೆಯಡಿ ಪ್ರತಿಗಳ ಸಂಖ್ಯೆ ೫೦೦ ಪ್ರತಿಗಳ ಗಡಿ ದಾಟಿ ೬೦೦ಕ್ಕೆ ಹತ್ತಿರವಾಗುತ್ತಿದೆ. ಆದರೆ ಸುಮಾರು ೪,೦೦೦ ಪ್ರತಿಗಳ ದೂರದ ಗುರಿ ಮುಟ್ಟಬೇಕಾದರೆ ನಮ್ಮ ಸ್ವಯಂಸೇವೆಯ ಒಗ್ಗಟ್ಟಿನ ಕೆಲಸ ಹೆಚ್ಚೆಚ್ಚು ಆಗಬೇಕಾಗಿದೆ. ಈ ಪ್ರಯುಕ್ತ ಪ್ರಾಯೋಗಿಕವಾಗಿಸಾಮೂಹಿಕ “ಪ್ರಸಂಗ ಸ್ಕ್ಯಾನಿಂಗ್ ಕಮ್ಮಟ” ವನ್ನು ನಡೆಸುತ್ತಿದ್ದೇವೆ.
ನಿಮ್ಮೊಂದಿಗಿರುವ ಸ್ಪಷ್ಟವಾಗಿ ಸ್ಕ್ಯಾನ್ ಮಾಡಬಲ್ಲಸ್ಮಾರ್ಟ್ ಫೋನುಗಳೇ ಪರಿಣಾಮಕಾರಿ ಆಯುಧಗಳಾಗಿ ಸಹಕರಿಸಲಿವೆ.ಯಕ್ಷಪ್ರೇಮಿ ಸ್ವಯಂಸೇವಕರೆಲ್ಲಾ ಅಂದು ನಮ್ಮೊಂದಿಗೆ ಕೆಲವು ಗಂಟೆಗಳ ಕಾಲ ಸೇರಿ ಸಹಕರಿಸಿ.ಇತ್ತ ತಲೆ ತಗ್ಗಿಸಿ ಕೆಲಸ ಮಾಡುತ್ತಾ, ಹಿನ್ನಲೆಯಲ್ಲಿ ಸುಶ್ರಾವ್ಯ ಭಾಗವತಿಕೆ ಕೇಳುತ್ತಾ, ನಾವೆಲ್ಲಾ ಬೇರೆಬೇರೆಯಾಗಿ ತಂದಿರುವ ಸ್ವಾದಮಡಕೆಗಳಿಂದ (pot luck)ರುಚಿಯಾದ ಕುರುಕಲು ತಿಂಡಿಗಳನ್ನು ತಿನ್ನುತ್ತಾ, ಅತಿಥೇಯರು ಕೊಡುವ ಚಾ/ಕಾಫಿ ಸವಿಯುತ್ತ, ಪ್ರೀತಿ, ಸ್ನೇಹ, ಸೇವೆ, ಸವಿ ಮಾತುಗಳು ಮತ್ತು ಉತ್ಸಾಹ ತುಂಬಿದ ವಾತಾವರಣವನ್ನು ನಾವೇ ಸೃಷ್ಟಿಸಿಕೊಂಡು ಕೆಲವು ಗಂಟೆಗಳ ಕಾಲ ಮೆರೆದು ಅದರಲ್ಲಿ ಒಮ್ಮೆ ಮರೆತು ಹೋಗೋಣ!
ಯಾವತ್ತು: ಇದೇ ಶನಿವಾರ, ಡಿಸೆಂಬರ್ ೭ನೇ ತಾರೀಖು, ೨೦೧೯ ಯಾವಾಗ: ೨ ಘಂಟೆ ಮಧ್ಯಾಹ್ನದಿಂದ ಸಂಜೆ ೬ ಘಂಟೆಯ ತನಕ (ಮಧ್ಯಾಹ್ನದ ಊಟ ಮಾಡಿಕೊಂಡೇ ಬನ್ನಿ) ಎಲ್ಲಿ: ಯಕ್ಷಪ್ರೇಮಿ, ಯಕ್ಷಸೇವಕ ಲ. ನಾ. ಭಟ್ಟರ ಮನೆ (ಅಪಾರ್ಟ್ಮೆಂಟ್) GA 35, Sowparnika Chandrakantha PHASE 1 V. Kal…