Posts

Showing posts from January, 2020

೨೦೨೦ರ ಮಕರ ಸಂಕ್ರಾಂತಿಯ ಉಡುಗೊರೆಯಾಗಿ ಪ್ರಸಂಗಪ್ರತಿಸಂಗ್ರಹವನ್ನು ೮೦೦ ಪ್ರತಿಗಳ ಗಡಿ ದಾಟಿಸಲಾಗಿದೆ!

Image
೨೦೨೦ರ ಮಕರ ಸಂಕ್ರಾಂತಿಯ ಉಡುಗೊರೆಯಾಗಿ ಪ್ರಸಂಗಪ್ರತಿಸಂಗ್ರಹವನ್ನು ೮೦೦ ಪ್ರತಿಗಳ ಗಡಿ ದಾಟಿಸಲಾಗಿದೆ. ನಮ್ಮ ಓದುಗರಿಗೆ ಸಂಕ್ರಾಂತಿಯ ಇಂದಿನ ಶುಭದಿನದಂದೇ ಸಿಹಿಸುದ್ದಿ ಕೊಡಬೇಕೆಂಬ ಹಟತೊಟ್ಟು ಸಹಸಂಪಾದಕರಾದ ಶ್ರೀಮತಿ ಅಶ್ವಿನಿ ಹೊದಲ ಅವರು ದಿನವಿಡೀ ಗಣಕಯಂತ್ರದ ಮುಂದೆ ಶ್ರಮಪಡುವ ಮೂಲಕ ಕಾಯಕದ ಕೈಲಾಸವನ್ನೇ ಇಲ್ಲಿಯ ತನಕ ಹಬ್ಬವನ್ನಾಗಿಸಿ  ಈಗ ತಾನೇ ಎಳ್ಳು ಬೀರಲು ಹೊರಟಿದ್ದಾರೆ.
ಇತ್ತೀಚಿನ ಜನವರಿ ೧೧ರ  ಪ್ರಸಂಗಪ್ರತಿ ಸ್ಕ್ಯಾನಿಂಗ್‌ ಕಮ್ಮಟದಲ್ಲಿ ಸ್ಕ್ಯಾನ್‌ ಆದ ಪ್ರಸಂಗಗಳು ಸೇರಿದ್ದು ೮೦೦ರ ಗಡಿ ದಾಟಲು ಸಾಧ್ಯವಾಗಿದೆ. ಮುಂದೆ ಎಲ್ಲೆಲ್ಲಿ ನೂರಾರು ನಮ್ಮ ಸಂಗ್ರಹದಲ್ಲಿ ಇರದ ಪ್ರಸಂಗ ಪುಸ್ತಕಗಳು ಲಭ್ಯವೋ ಅಲ್ಲಲ್ಲಿ ಸ್ಕ್ಯಾನಿಂಗ್‌ ಕಮ್ಮಟಗಳನ್ನು ನಡೆಸುವ ಸ್ವಯಂಸೇವಕರು ಒಟ್ಟಾದರೆ, ತಿಂಗಳಿಗೆ ಒಂದು ಕಮ್ಮಟವಾದರೂ ನಡೆದು ನಾವು ೪,೦೦೦ ಪ್ರಸಂಗಪ್ರತಿಗಳ ಗುರಿಯತ್ತ ಬೇಗ ಸಾಗುವುದು ಸಾಧ್ಯ ಎನ್ನಿಸುತ್ತಿದೆ. 
ಪ್ರಸಂಗಪ್ರತಿಸಂಗ್ರಹ ಕೋಷ್ಟಕಕ್ಕಾಗಿ ಕೊಂಡಿ ಇದು, ಇದನ್ನೇ ಒತ್ತಿರಿ.

ಪ್ರಸಂಗಪ್ರತಿಸಂಗ್ರಹ  ಆಂಡ್ರೋಯ್ಡ್ ಆಪ್ ನ ಕೊಂಡಿ : https://play.google.com/store/apps/details?id=prasanga.prati.sangraha
ಹಳೆಯ ಕೃತಿಗಳ ಜೊತೆಗೆ ಸಮಕಾಲೀನ ಕೃತಿಗಳೂ ಸೇರುತ್ತಿವೆ. ಸಮಕಾಲೀನ ಕೃತಿಗಳ ಕುರಿತಾಗಿ ಅವುಗಳ ಕವಿ ಹಾಗೂ ಪ್ರಕಾಶಕರ ಒಪ್ಪಿಗೆ ನೇರವಾಗಿ ಇಲ್ಲಾ ಪರೋಕ್ಷವಾಗಿ ತೆಗೆದುಕೊಳ್ಳುತ್ತಿದ್ದೇವೆ. ಒಪ್ಪಿಗೆ ಸಿಗದಿದ್ದರೆ ಅವ…

ಜನವರಿ ೧೧, ೨೦೨೦: ಮತ್ತೆ ಸುಮಾರು ೭೦ ಪ್ರಸಂಗಗಳ ಸ್ಕ್ಯಾನ್‌ ಆಗಿ ಮೂರನೇ ಸಾಮೂಹಿಕ ಪ್ರಸಂಗ ಸ್ಕ್ಯಾನ್‌ ಕಮ್ಮಟ ಸಂಪನ್ನ

Image
ಬರೇ ೫ ಜನರ ಸ್ವಯಂಸೇವೆ ಸಿಕ್ಕರೂ ಸುಮಾರು ೭೦ ಪ್ರಸಂಗಗಳ ಸ್ಕ್ಯಾನ್‌ ಒಮ್ಮೆಲೇ ಆಗಿಹೋಗುವ ಮೂಲಕ ಮೂರನೇ ಪ್ರಸಂಗ ಸ್ಕ್ಯಾನ್‌ ಕಮ್ಮಟವು ಫಲಕಾರಿಯಾಗಿ ಸಂಪನ್ನವಾಯಿತು.

 ವಸಂತಕೃಷ್ಣರ ಮನೆಯಲ್ಲಿ ನಡೆದ ಈ ಕಮ್ಮಟದಲ್ಲಿ ವಸಂತಕೃಷ್ಣರ ತಂದೆ ಡಾ. ಪಟ್ಟಾಜೆ ಗಣೇಶ ಭಟ್ಟರ ಸಂಗ್ರಹದ ಉಳಿದ ಪ್ರಸಂಗ ಪುಸ್ತಕಗಳು, ಲ. ನಾ. ಭಟ್ಟರ ಉಳಿದ ಪ್ರಸಂಗ ಪುಸ್ತಕಗಳು, ಹಾಗೂ ಡಾ. ಆನಂದರಾಮ ಉಪಾಧ್ಯ ಹಾಗೂ ರವಿ ಮಡೋಡಿ ಸಂಗ್ರಹದ ಕೆಲವೇ ಪುಸ್ತಕಗಳು  ಸ್ಕ್ಯಾನ್‌ ಆದವು. ಡಾ. ಆನಂದರಾಮ ಉಪಾಧ್ಯ ಹಾಗೂ ರವಿ ಮಡೋಡಿಯವರ ಸಂಗ್ರಹದ ಪ್ರಸಂಗ ಪುಸ್ತಿಕೆಗಳ ಸ್ಕ್ಯಾನ್‌ ಮುಗಿಸಲು ಮುಂದಿನ ಕಮ್ಮಟವೇ ಬೇಕಾಗಬಹುದು.

ಈ ಕಮ್ಮಟದಲ್ಲಿ ಸ್ಕ್ಯಾನ್‌ ಆದ ಪ್ರಸಂಗಗಳು ಇನ್ನೊಂದು ವಾರದಲ್ಲೇ  ಒಪ್ಪಗೊಂಡು ನಮ್ಮ ಸಂಗ್ರಹದಲ್ಲಿ ಸೇರಿ ಒಟ್ಟು ಸಂಗ್ರಹವು ೮೦೦ರ ಗಡಿ ದಾಟುವ ಶುಭ ಸಮಾಚಾರವನ್ನು ನಿರೀಕ್ಷಿಸಿರಿ. 


ಪ್ರಸಂಗಪ್ರತಿಸಂಗ್ರಹ ಕೋಷ್ಟಕಕ್ಕಾಗಿ ಕೊಂಡಿ ಇದು, ಇದನ್ನೇ ಒತ್ತಿರಿ.

ಪ್ರಸಂಗಪ್ರತಿಸಂಗ್ರಹ  ಆಂಡ್ರೋಯ್ಡ್ ಆಪ್ ನ ಕೊಂಡಿ : https://play.google.com/store/apps/details?id=prasanga.prati.sangraha

ವಸಂತಕೃಷ್ಣರು ಹಾಗೂ ಅವರ ಸಹ-ಸಹೋದರ ಕಿಶೋರ್‌ ಹತ್ತು ಘಂಟೆಗೆ ಕಾಯಕವನ್ನು ಶುರು ಮಾಡಿದರು. ಹನ್ನೊಂದು ಘಂಟೆಗೆ ನಟರಾಜ ಉಪಾಧ್ಯ ಹಾಗೂ ಅಶ್ವಿನಿ ಹೊದಲ ಸೇರಿಕೊಂಡರು. ಒಂದೂವರೆ ಘಂಟೆಗೆ ರವಿ ಮಡೋಡಿ ಸೇರಿಕೊಂಡರು.

ವಸಂತಕೃಷ್ಣರ ಹೆಂಡತಿ ವಾತ್ಸಲ್ಯ ಹಾಗೂ ಅವರ ತಾಯಿ ಸೇರಿದ…

ಮೂರನೇ ಸಾಮೂಹಿಕ ಪ್ರಸಂಗ ಸ್ಕ್ಯಾನಿಂಗ್ ಕಮ್ಮಟಕ್ಕೆ ನಿಮಗೆ ಸವಿನಯ ಆಮಂತ್ರಣ!

Image
ಪ್ರಸಂಗಪ್ರತಿ  ಸಂಗ್ರಹ ಯೋಜನೆಯಡಿ  ನಮ್ಮ ಸಂಗ್ರಹವು ೭೦೦ ಪ್ರತಿಗಳ ಗಡಿ ದಾಟಿ ೮೦೦ರತ್ತ ದಾಪುಗಾಲು ಇಡುತ್ತಿದೆ.  ಆದರೆ ಸುಮಾರು ೪,೦೦೦ ಪ್ರತಿಗಳ ದೂರದ ಗುರಿ ಮುಟ್ಟಬೇಕಾದರೆ ನಮ್ಮ ಸ್ವಯಂಸೇವೆಯ ಒಗ್ಗಟ್ಟಿನ ಕೆಲಸ ಹೆಚ್ಚೆಚ್ಚು ಆಗಬೇಕಾಗಿದೆ. ಈ ಪ್ರಯುಕ್ತ ಮೂರನೇ  ಸಾಮೂಹಿಕ “ಪ್ರಸಂಗ ಸ್ಕ್ಯಾನಿಂಗ್ ಕಮ್ಮಟ” ವನ್ನು ಇದೇ ಶನಿವಾರ, ಜನವರಿ ೧೧, ೨೦೨೦ರಂದು ನಡೆಸುತ್ತಿದ್ದೇವೆ.   
ನಿಮ್ಮೊಂದಿಗಿರುವ ಸ್ಪಷ್ಟವಾಗಿ ಸ್ಕ್ಯಾನ್ ಮಾಡಬಲ್ಲ  ಸ್ಮಾರ್ಟ್ ಫೋನುಗಳೇ ಪರಿಣಾಮಕಾರಿ ಆಯುಧಗಳಾಗಿ ಸಹಕರಿಸಲಿವೆ.  ಯಕ್ಷಪ್ರೇಮಿ ಸ್ವಯಂಸೇವಕರೆಲ್ಲಾ ಅಂದು ನಮ್ಮೊಂದಿಗೆ ಕೆಲವು ಗಂಟೆಗಳ ಕಾಲ ಸೇರಿ ಸಹಕರಿಸಿ.  ಬೆಳಿಗ್ಗೆ ೧೦ ಘಂಟೆಯಿಂದ ಸಂಜೆ ೫ ರ ತನಕ ನಡೆಯುವ ಈ ಕಮ್ಮಟದಲ್ಲಿ ಭಾಗವಹಿಸುವವರಿಗೆ ಊಟ, ತಿಂಡಿ, ಕಾಫಿ / ಚಾಗಳ ವ್ಯವಸ್ಥೆ ಇರುತ್ತದೆ. ಕೆಲಸದ ಜೊತೆಗೆ ಯಕ್ಷಗಾನದ ವಾತಾವರಣ ಸೃಷ್ಟಿಸಿಕೊಂಡು ಸ್ವಲ್ಪ ಗಮ್ಮತ್ತು ಕೂಡಾ ಮಾಡೋಣ!
ಯಾವತ್ತು: ಇದೇ ಶನಿವಾರ, ಜನವರಿ ೧೧ನೇ ತಾರೀಖು, ೨೦೨೦ ಯಾವಾಗ: ಬೆಳಿಗ್ಗೆ ೧೦ ಘಂಟೆಯಿಂದ ಮಧ್ಯಾಹ್ನ  ೫ ಘಂಟೆಯ ತನಕ, ಶಕ್ತಿ ಉಳಿದವರಿಗೆ ಆರು ಘಂಟೆಯ ತನಕ ಎಳೆಯೋಣ  ಎಲ್ಲಿ: ರಾಜರಾಜೇಶ್ವರಿ ನಗರದ ವಸಂತಕೃಷ್ಣ ಭಟ್‌ ಪಟ್ಟಾಜೆ ಅವರ ಮನೆ FF23C Sai Nandana Apartment Hemmigepura Ward 198, RR Nagar, Bengaluru, Karnataka 560098
ಸ್ಥಳ ನಕ್ಷೆFF23C Sai Nandana Apartment
ನೀವು ಬರುವುದನ್ನು ಮೊದಲೇ ತಿಳಿಸ…