Posts

Showing posts from February, 2020

900ರ ಗಡಿ ದಾಟಿ ಮಾರ್ಚಿಯಲ್ಲಿ 1000 ಪ್ರಸಂಗಪ್ರತಿಗಳನ್ನು ದಾಟುವ ತವಕದಲ್ಲಿ ಪ್ರಸಂಗಪ್ರತಿಸಂಗ್ರಹ!

Image
ಪ್ರಸಂಗಪ್ರತಿಸಂಗ್ರಹದಲ್ಲಿ ಈಗ ೯೦೦ಕ್ಕೂ ಮೀರಿ ಪ್ರಸಂಗಪ್ರತಿಗಳಿವೆ. ಇತ್ತೀಚಿನ ಫೆಬ್ರವರಿ ೧೬ರ  ಪ್ರಸಂಗಪ್ರತಿ ಸ್ಕ್ಯಾನಿಂಗ್‌ ಕಮ್ಮಟದಲ್ಲಿ ಸ್ಕ್ಯಾನ್‌ ಆದ ಪ್ರಸಂಗಗಳು ಸೇರಿದ್ದು ೯೦೦ರ ಗಡಿ ದಾಟಲು ಸಾಧ್ಯವಾಗಿದೆ. ಸಂಚಿ ಪ್ರತಿಷ್ಟಾನದವರು archive.org ನಲ್ಲಿ ಸೇರಿಸಿದ ಪ್ರಸಂಗಗಳಿಗೆ ನೇರ ಕೊಂಡಿಗಳನ್ನು ಕೊಟ್ಟು, ಅವುಗಳನ್ನೂ ನಮ್ಮ ಸಂಗ್ರಹದ ಮೂಲಕ ನಿಮಗೆ ತಲುಪಿಸಲು ಸಹಕರಿಸುತ್ತಿದ್ದೇವೆ.   ಮುಂದೆ ಎಲ್ಲೆಲ್ಲಿ ನೂರಾರು ನಮ್ಮ ಸಂಗ್ರಹದಲ್ಲಿ ಇರದ ಪ್ರಸಂಗ ಪುಸ್ತಕಗಳು ಲಭ್ಯವೋ ಅಲ್ಲಲ್ಲಿ ಸ್ಕ್ಯಾನಿಂಗ್‌ ಕಮ್ಮಟಗಳನ್ನು ನಡೆಸುವ ಸ್ವಯಂಸೇವಕರು ಒಟ್ಟಾದರೆ, ತಿಂಗಳಿಗೆ ಒಂದು ಕಮ್ಮಟವಾದರೂ ನಡೆದು ನಾವು ೪,೦೦೦ ಪ್ರಸಂಗಪ್ರತಿಗಳ ಗುರಿಯತ್ತ ಬೇಗ ಸಾಗುವುದು ಸಾಧ್ಯ ಎನ್ನಿಸುತ್ತಿದೆ. 
ಪ್ರಸಂಗಪ್ರತಿಸಂಗ್ರಹ ಕೋಷ್ಟಕಕ್ಕಾಗಿ ಕೊಂಡಿ ಇದು, ಇದನ್ನೇ ಒತ್ತಿರಿ.

ಪ್ರಸಂಗಪ್ರತಿಸಂಗ್ರಹ  ಆಂಡ್ರೋಯ್ಡ್ ಆಪ್ ನ ಕೊಂಡಿ : https://play.google.com/store/apps/details?id=prasanga.prati.sangraha
ಹಳೆಯ ಕೃತಿಗಳ ಜೊತೆಗೆ ಸಮಕಾಲೀನ ಕೃತಿಗಳೂ ಸೇರುತ್ತಿವೆ. ಸಮಕಾಲೀನ ಕೃತಿಗಳ ಕುರಿತಾಗಿ ಅವುಗಳ ಕವಿ ಹಾಗೂ ಪ್ರಕಾಶಕರ ಒಪ್ಪಿಗೆ ನೇರವಾಗಿ ಇಲ್ಲಾ ಪರೋಕ್ಷವಾಗಿ ತೆಗೆದುಕೊಳ್ಳುತ್ತಿದ್ದೇವೆ. ಒಪ್ಪಿಗೆ ಸಿಗದಿದ್ದರೆ ಅವುಗಳನ್ನು ತಡೆ ಹಿಡಿದು, ಮುಂದೆ ಸಿಗಬಹುದೆಂಬ ಆಶಯದಲ್ಲಿ ಇದ್ದೇವೆ. ಇಲ್ಲಿ ಒಂದು ಸೂಕ್ಷ್ಮ ವಿಚಾರವಿದೆ. ಅಂತರಜಾಲದಲ್ಲಿ ಸ್…

ಫೆಬ್ರವರಿ ೧೬, ೨೦೨೦: ಮತ್ತೆ ಸುಮಾರು ೫೦ ಪ್ರಸಂಗಗಳ ಸ್ಕ್ಯಾನ್‌ ಆಗಿ ನಾಲ್ಕನೇ ಸಾಮೂಹಿಕ ಪ್ರಸಂಗ ಸ್ಕ್ಯಾನ್‌ ಕಮ್ಮಟ ಸಂಪನ್ನ

Image
ಬರೇ ೪ ಜನರ ಸ್ವಯಂಸೇವೆ ಸಿಕ್ಕರೂ ಸುಮಾರು ೫೦ ಪ್ರಸಂಗಗಳ ಸ್ಕ್ಯಾನ್‌ ಒಮ್ಮೆಲೇ ಆಗಿಹೋಗುವ ಮೂಲಕ ನಾಲ್ಕನೇ ಪ್ರಸಂಗ ಸ್ಕ್ಯಾನ್‌ ಕಮ್ಮಟವು ಫಲಕಾರಿಯಾಗಿ ಸಂಪನ್ನವಾಯಿತು.

ನಟರಾಜ ಉಪಾಧ್ಯರ ಮನೆಯಲ್ಲಿ ನಡೆದ ಈ ಕಮ್ಮಟದಲ್ಲಿ ಡಾ. ಆನಂದರಾಮ ಉಪಾಧ್ಯರ ಸಂಗ್ರಹದ ಹೆಚ್ಚಿನ  ಪ್ರಸಂಗ  ಪುಸ್ತಕಗಳ ಸ್ಕ್ಯಾನ್‌ ಆದವು. ಡಾ. ಆನಂದರಾಮ ಉಪಾಧ್ಯ ಹಾಗೂ ರವಿ ಮಡೋಡಿಯವರ ಸಂಗ್ರಹದ ಪ್ರಸಂಗ ಪುಸ್ತಿಕೆಗಳ ಸ್ಕ್ಯಾನ್‌ ಮುಗಿಸಲು ಮುಂದಿನ ಕಮ್ಮಟವೇ ಬೇಕಾಗಬಹುದು.

ಈ ಕಮ್ಮಟದಲ್ಲಿ ಸ್ಕ್ಯಾನ್‌ ಆದ ಪ್ರಸಂಗಗಳು ಇನ್ನೊಂದು ವಾರದಲ್ಲೇ  ಒಪ್ಪಗೊಂಡು ನಮ್ಮ ಸಂಗ್ರಹದಲ್ಲಿ ಸೇರಿ ಒಟ್ಟು ಸಂಗ್ರಹವು ೯೦೦ರ ಗಡಿ ದಾಟುವ ಶುಭ ಸಮಾಚಾರವನ್ನು ನಿರೀಕ್ಷಿಸಿರಿ. 

ಪ್ರಸಂಗಪ್ರತಿಸಂಗ್ರಹ ಕೋಷ್ಟಕಕ್ಕಾಗಿ ಕೊಂಡಿ ಇದು, ಇದನ್ನೇ ಒತ್ತಿರಿ.
ಪ್ರಸಂಗಪ್ರತಿಸಂಗ್ರಹ  ಆಂಡ್ರೋಯ್ಡ್ ಆಪ್ ನ ಕೊಂಡಿ : https://play.google.com/store/apps/details?id=prasanga.prati.sangraha
ಈ ಕಮ್ಮಟದಲ್ಲಿ ಅಮೂಲ್ಯ, ಅಶ್ವಿನಿ ಹೊದಲ, ವಸಂತಕೃಷ್ಣ ಪಟ್ಟಾಜೆ ಹಾಗೂ ನಟರಾಜ ಉಪಾಧ್ಯರ ಸ್ವಯಂಸೇವೆ ಸೇರಿಹೋಯಿತು. ಅಖಿಲಾ, ಆಶಾ ಹಾಗೂ ಶಾಲಿನಿ ವಾಸುದೇವ ಅವರ ಆತಿಥ್ಯದ ಸಹಕಾರ ಸಿಕ್ಕಿತು. ಮಧ್ಯಾಹ್ನದ ಊಟಕ್ಕೆ ಹೀರೆಕಾಯಿ ಚಟ್ಟಿ, ಪಲಾವ್‌, ಕೂಟು, ಸಾರು ಅಲ್ಲದೇ ಅಶ್ವಿನಿ ಅವರು ತಂದ ಲಾಡು, ಹೋಳಿಗೆ ಹಾಗೂ ಕೋಡುಬಳೆ ಕಳೆಕಟ್ಟಿತು.

ಮಾರ್ಚ್‌ ತಿಂಗಳ ೨೨ರ ಹಾಗೆ  ಬೆಂಗಳೂರಲ್ಲೇ ಇನ್ನೊಂದು ಇದೇ ರೀತಿಯ ಕಮ್ಮಟವಾಗ…

ನಾಲ್ಕನೇ ಸಾಮೂಹಿಕ ಪ್ರಸಂಗ ಸ್ಕ್ಯಾನಿಂಗ್ ಕಮ್ಮಟಕ್ಕೆ ನಿಮಗೆ ಸವಿನಯ ಆಮಂತ್ರಣ!

Image
ಪ್ರಸಂಗಪ್ರತಿ  ಸಂಗ್ರಹ ಯೋಜನೆಯಡಿ  ನಮ್ಮ ಸಂಗ್ರಹವು ೮೦೦ ಪ್ರತಿಗಳ ಗಡಿ ದಾಟಿ ೯೦೦ರತ್ತ ದಾಪುಗಾಲು ಇಡುತ್ತಿದೆ.  ಆದರೆ ಸುಮಾರು ೪,೦೦೦ ಪ್ರತಿಗಳ ದೂರದ ಗುರಿ ಮುಟ್ಟಬೇಕಾದರೆ ನಮ್ಮ ಸ್ವಯಂಸೇವೆಯ ಒಗ್ಗಟ್ಟಿನ ಕೆಲಸ ಹೆಚ್ಚೆಚ್ಚು ಆಗಬೇಕಾಗಿದೆ. ಈ ಪ್ರಯುಕ್ತ ನಾಲ್ಕನೇ  ಸಾಮೂಹಿಕ “ಪ್ರಸಂಗ ಸ್ಕ್ಯಾನಿಂಗ್ ಕಮ್ಮಟ” ವನ್ನು ಇದೇ ಭಾನುವಾರ, ಫೆಬ್ರವರಿ ೧೬, ೨೦೨೦ರಂದು ನಡೆಸುತ್ತಿದ್ದೇವೆ.    ನಿಮ್ಮೊಂದಿಗಿರುವ ಸ್ಪಷ್ಟವಾಗಿ ಸ್ಕ್ಯಾನ್ ಮಾಡಬಲ್ಲ  ಸ್ಮಾರ್ಟ್ ಫೋನುಗಳೇ ಪರಿಣಾಮಕಾರಿ ಆಯುಧಗಳಾಗಿ ಸಹಕರಿಸಲಿವೆ.  ಯಕ್ಷಪ್ರೇಮಿ ಸ್ವಯಂಸೇವಕರೆಲ್ಲಾ ಅಂದು ನಮ್ಮೊಂದಿಗೆ ಕೆಲವು ಗಂಟೆಗಳ ಕಾಲ ಸೇರಿ ಸಹಕರಿಸಿ.  ಬೆಳಿಗ್ಗೆ ೧೦ ಘಂಟೆಯಿಂದ ಸಂಜೆ ೫ ರ ತನಕ ನಡೆಯುವ ಈ ಕಮ್ಮಟದಲ್ಲಿ ಭಾಗವಹಿಸುವವರಿಗೆ ಊಟ, ತಿಂಡಿ, ಕಾಫಿ / ಚಾಗಳ ವ್ಯವಸ್ಥೆ ಇರುತ್ತದೆ. ಕೆಲಸದ ಜೊತೆಗೆ ಯಕ್ಷಗಾನದ ವಾತಾವರಣ ಸೃಷ್ಟಿಸಿಕೊಂಡು ಸ್ವಲ್ಪ ಗಮ್ಮತ್ತು ಕೂಡಾ ಮಾಡೋಣ!
ಯಾವತ್ತು: ಇದೇ ಭಾನುವಾರ, ಫೆಬ್ರವರಿ  ೧೬,೨೦೨೦ ಯಾವಾಗ: ಬೆಳಿಗ್ಗೆ ೧೦ ಘಂಟೆಯಿಂದ ಮಧ್ಯಾಹ್ನ  ೫ ಘಂಟೆಯ ತನಕ, ಶಕ್ತಿ ಉಳಿದವರಿಗೆ ಆರು ಘಂಟೆಯ ತನಕ ಎಳೆಯೋಣ  ಎಲ್ಲಿ: ಕತ್ರಿಗುಪ್ಪೆ ಪಕ್ಕದ ವಿವೇಕಾನಂದನಗರದ ನಟರಾಜ ಉಪಾಧ್ಯ ಅವರ ಮನೆ #82, Ashrama, First Main, Vivekanandanagar, Katriguppe Main Road, Bengaluru, Karnataka 560085 (Corner house on the right after Kaveri School)
ಸ್ಥಳ ನಕ…