Posts

Showing posts from March, 2020

ಶಾರ್ವರೀ ಸಂವತ್ಸರದ ಹೊಸ ವರುಷದ ಹರುಷವ ಹೆಚ್ಚಿಸುವತ್ತ ಪ್ರಸಂಗಪ್ರತಿಸಂಗ್ರಹವು ೧,೦೦೦ ಪ್ರತಿಗಳ ಗಡಿಯನ್ನು ದಾಟಿದೆ!

Image
ನಿಮ್ಮೆಲ್ಲರ ಸಹಾಯ, ಸಹಕಾರ ಹಾಗೂ ಹಾರೈಕೆಗಳಿಗೆ ಧನ್ಯವಾದಗಳು, ಪ್ರಸಂಗಪ್ರತಿಸಂಗ್ರಹವು ಶಾರ್ವರೀ ಸಂವತ್ಸರವನ್ನು ೧,೦೦೦ ಪ್ರತಿಗಳ ಗಡಿಯನ್ನು ದಾಟಿ ಹೊಸ ವರುಷಕ್ಕೆ ನವ ಸ್ಫೂರ್ತಿಯ ಲಗ್ಗೆ ಇಟ್ಟಿದೆ.
ಮೊದಲೇ ತಿಳಿಸದಂತೆ, ಸಂಚಿ ಪ್ರತಿಷ್ಟಾನದವರು archive.org ನಲ್ಲಿ ಸೇರಿಸಿದ ಪ್ರಸಂಗಗಳಿಗೆ ಕೂಡಾ ನೇರ ಕೊಂಡಿಗಳನ್ನು ಕೊಟ್ಟು, ಅವುಗಳನ್ನೂ ನಮ್ಮ ಸಂಗ್ರಹದ ಮೂಲಕ ನಿಮಗೆ ತಲುಪಿಸಲು ಸಹಕರಿಸುತ್ತಿದ್ದೇವೆ.
 ಕರೋನಾ ಕಾಟದ ಕಾರಣ, ನಮ್ಮ ಮಾರ್ಚಿಯ ಪ್ರಸಂಗ ಸ್ಕ್ಯಾನಿಂಗ್‌ ಕಮ್ಮಟ ನಡೆಯದೇ ಸಾವಿರದ ಗೆರೆಯನ್ನು ದಾಟಲು ಕೆಲವು ದಿನಗಳೇ ತಡವಾದವು. ಕರೋನಾ ಮಾರಿಯ ಮೇಲೆ ಸೇಡು ತೀರಿಸಿಕೊಳ್ಳಲು, ದಯವಿಟ್ಟು ಹೆಚ್ಚೆಚ್ಚು ಜನರು ತಮ್ಮ ಅಪೂರ್ವ ಸಂಗ್ರಹಗಳಿಂದ ಈವರೆಗೆ ಸೇರಿಸಲು ಸಾಧ್ಯವಾಗದ ಹಸ್ತಪ್ರತಿಗಳನ್ನೂ ಪ್ರಕಟಿತ ಪ್ರಸಂಗಪ್ರತಿಗಳನ್ನೂ ಸ್ಕ್ಯಾನ್‌ ಮಾಡಿ ದಯವಿಟ್ಟು ನಮಗೆ ಕಳುಹಿಸಿ. ೨,೦೦೦ದ ಗೆರೆಯನ್ನೂ ಬೇಗ ದಾಟೋಣ!

ಪ್ರಸಂಗಪ್ರತಿಸಂಗ್ರಹ ಕೋಷ್ಟಕಕ್ಕಾಗಿ ಕೊಂಡಿ ಇದು, ಇದನ್ನೇ ಒತ್ತಿರಿ.

ಪ್ರಸಂಗಪ್ರತಿಸಂಗ್ರಹ  ಆಂಡ್ರೋಯ್ಡ್ ಆಪ್ ನ ಕೊಂಡಿ : https://play.google.com/store/apps/details?id=prasanga.prati.sangraha
ಹಳೆಯ ಕೃತಿಗಳ ಜೊತೆಗೆ ಸಮಕಾಲೀನ ಕೃತಿಗಳೂ ಸೇರುತ್ತಿವೆ. ಸಮಕಾಲೀನ ಕೃತಿಗಳ ಕುರಿತಾಗಿ ಅವುಗಳ ಕವಿ ಹಾಗೂ ಪ್ರಕಾಶಕರ ಒಪ್ಪಿಗೆ ನೇರವಾಗಿ ಇಲ್ಲಾ ಪರೋಕ್ಷವಾಗಿ ತೆಗೆದುಕೊಳ್ಳುತ್ತಿದ್ದೇವೆ. ಒಪ್ಪಿಗೆ ಸಿಗದಿದ್ದರೆ…