Posts

Showing posts from July, 2020

ಪ್ರಸಂಗಪ್ರತಿ ಸಂಗ್ರಹದ ಒಟ್ಟುಪ್ರತಿಗಳ ಸಂಖ್ಯೆ ೧೧೩೦!

Image
ಸಹೃದಯಿ ಯಕ್ಷಬಾಂಧವರೇ,
ತಮ್ಮೆಲ್ಲರ ಸಹಾಯ ಸಹಕಾರದಿಂದ ಪ್ರಸಂಗ ಪ್ರತಿಸಂಗ್ರಹದಲ್ಲಿರುವ ಒಟ್ಟು ಪ್ರತಿಗಳ ಸಂಖ್ಯೆ ೧೧೩೦! ವರ್ತಮಾನ ಕವಿಗಳೂ ಕೂಡ ತಮ್ಮ ತಮ್ಮ ಪ್ರಸಂಗಕೃತಿಗಳನ್ನು ನಮ್ಮ ಸಂಗ್ರಹಕ್ಕೆ ಸೇರಿಸಲು ಬಹಳ ಸಂತೋಷದಿಂದ ಒಪ್ಪಿಗೆ ಸೂಚಿಸುತ್ತಿರುವುದು ನಮ್ಮ ಸಂತೋಷವನ್ನುಇಮ್ಮಡಿಗೊಳಿಸಿದೆ. ಪ್ರಸಂಗಕರ್ತರೂ, ವಿದ್ವಾಂಸರೂ ಆದ ಡಾ. ದಿನಕರ ಎಸ್.‌ ಪಚ್ಚನಾಡಿಯವರ ಪ್ರಸಂಗ ಸಂಪುಟವನ್ನು ಸಂಗ್ರಹಕ್ಕೆ ಸೇರಿಸಿದ್ದೇವೆ. ಹಿರಿಯ ಯಕ್ಷಗಾನ ಅರ್ಥಧಾರಿಗಳಾದ ಶ್ರೀ ಉಮೇಶ ಆಚಾರ್ಯ ಗೇರುಕಟ್ಟೆಯವರು ತಮ್ಮ ಬಳಿಯಿರುವ ವಿಶೇಷವಾದ  ೫೦ಕ್ಕೂ ಹೆಚ್ಚು ಪ್ರತಿಗಳನ್ನು ನಮ್ಮ ಸಂಗ್ರಹಕ್ಕೆ ಸೇರಿಸಲು ನಮ್ಮ ತಂಡದವರಿಗೆ ಕೊಟ್ಟು ಯಕ್ಷಗಾನದ ಮೇಲಿನ ತಮ್ಮ ಅಭಿಮಾನವನ್ನು ನಿರೂಪಿಸಿದ್ದಾರೆ. ಬೆಳಸಲಿಗೆ ಗಣಪತಿ ಹೆಗಡೆಯವರ ಸುಪುತ್ರರಾದ ಶ್ರೀ ಸುರೇಶ ಬೆಳಸಲಿಗೆ ಮತ್ತು ಅವರ ಕುಟುಂಬಸ್ಥರಾದ ಶ್ರೀ ಶೇಷಗಿರಿ ಹೆಗಡೆಯವರು ಬೆಳಸಲಿಗೆಯವರ ಪ್ರತಿಗಳನ್ನು ನೀಡಿ ಸಹಕರಿಸಿದ್ದಾರೆ.  ಮಂಗಳೂರಿನ ಶ್ರೀ ರಾಘವೇಂದ್ರ ಪುತ್ತುರಾಯರನ್ನು ನಮ್ಮ ತಂಡ ಸಂಪರ್ಕಿಸಿದಾಗ ಅವರೂ ಕೂಡ ತಮ್ಮ ಬಳಿಯಿರುವ ಪ್ರಸಂಗ ಪ್ರತಿಗಳನ್ನು ಒಂದೊಂದಾಗಿ ನಮಗೆ ಕಳಿಸುತ್ತಿದ್ದಾರೆ. ಶ್ರೀ ರಾಘವರಾಯರ ಕೃತಿಗಳನ್ನು ಸಂಗ್ರಹಕ್ಕೆ ಸೇರಿಸಲು ಅವರ ಸುಪುತ್ರರಾದ ಶ್ರೀ ಮಧುಕರ ಭಾಗವತರು ಸಮ್ಮತಿ ಸೂಚಿಸಿದ್ದಾರೆ. ಆಳ್ವಾಸ್‌ ಸಂಸ್ಥೆಯಲ್ಲಿ ಕನ್ನಡ ಅಧ್ಯಾಪಕರಾದ ಶ್ರೀ ಹರೀಶ್‌ ಟಿ. ಜಿ.ಯವರು ತಮ್ಮ ಕುಟುಂಬದ ಹಿರಿಯ…